Durgavahini Varg south karnatak

Bengluru 28 June 2018 – Vishwa Hindu Parishad Karnataka South had organised 7 days Durgavahini Varg from May 20th to 27th at Seva Bharathi school in Chamarajanagar. 19 PU students, 2 Diploma students, 12 Graduate students, 8 working women and 11 house makers totally 52 members actively participated in this Varg.Varg was started with an inaugural function on 20th May. In the inaugural function Srimathi Ramarathna, Prantha Mathrushakthi Pramukh said the students about significance and intention of this Varg.
In different sessions held in Varg, many dignitaries gave their time to guide,inspire and motivate Durgavahini participent. Sri Jagannatha Shasthri, Prantha Karyadarshi, told students about the journey of Vishwa Hindu Parishad and Durgavahini. Srimathi Ramarathna spoke about Shodasha Samskara. She also mentioned that a woman is given a Holy place only in Hindu dharma. Srimathi Vidya Mallya and her team demonstrated Balasanskara Kendra to students.
Joint General Secretary of Vishwa Hindu Parishad, Sri Surendra Kumar Jain gave a lecture about Glory of our History. Srimathi Rekha Lakshman said how communication and by contacts, we can maintain our relationships and increase our self-confidence. Sri Surendra Kumar Jain took another session and taught about Karyakartha’s Quality and Karya.

Sri T.A.P. Shenoy was in the Varg for 2 days and showed us the right path to achieve goals. He spoke about Sister Niveditha and Sri Krishna. He mentioned that Krishna’s Personality is left unrecognisable. He also explained about Immense power and strategy of Sri Krishna. Sri Rajesh taught about how to give a speech.
Bengaluru Mahanagara Karyadarshi, Sri Krishnamurthy taught how to organise a program with system strategy and make it a grand success. Mangaluru Vibagh Karyadarshi, Sri Sharan Pamp vel, demonstrated and taught how to do a movement and protests. Dr.Chandrashekar taught how to prepare medicines with household items and be healthy.

Srimathi Chaya Nanjappa, founder-partner of Nectar Fresh said the importance of Financial self-reliance. Pranth Kshethriya mathrushakthi pramukh, Srimathi Kishori Thayiji explained importance of Shakthisadan Kendra and how to do it by demonstration. Kshethriya sanghatana karyadarshi, Sri Gopal Ji spoke about Social harmony, its significance and Women’s role in it.

Srimathi Kathyayini and Srimathi Saralaveni demonstrated Hindu based hairstyles and its importance. Srimathi Meera Ghate explained to students about the opportunities and the challenges we need to face in our field.In 7 days of Varg, Students were thought Samatha, Niyudha, Danda, Churika, yoga and Rifle by Srimathi Vidya Mallya, Kumari Akshatha and Kumari Shwetha. Srimathi Kusuma Narayanachar, Prantha Darma prasarana pramukh lead the Varg as Shibiradhikari.

On the 6th day of the Varg, held a public conclusion where students Performed a demo of their physical activities taught in Varg, like Yoga, Churika, Niyudha and Smatha. In this program, Sri Balasubhramanya, Srimathi Kishori Thayiji, Srimathi Kusuma Narayanachar, Sri Gopal Ji and Srimathi Ramarathna were present. Varg ended on 27 Sunday with Shasthra pooja and Deekshanth.

ವಿಶ್ವ ಹಿಂದೂ ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತ ದುರ್ಗಾವಾಹಿನಿ ವರ್ಗವನ್ನು ಚಾಮರಾಜನಗರದ ಸೇವಾ ಭಾರತೀ ಶಾಲೆಯಲ್ಲಿ ಮೇ ತಿಂಗಳು ೨೦ನೇ ತಾರೀಖಿನಿಂದ ೨೭ರವರೆಗೆ ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ೧೯ ಪದವಿ ಪೂರ್ವ ವಿದ್ಯಾರ್ಥಿನಿಯರು, ೨ ಡಿಪ್ಲೋಮ ವಿದ್ಯಾರ್ಥಿನಿಯರು, ೧೨ ಪದವಿ ವಿದ್ಯಾರ್ಥಿನಿಯರು, ೮ ವೃತಿಪರರು ಹಾಗು ೧೧ ಗೃಹಣಿಯರು ಒಟ್ಟು ೫೨ ಶಿಕ್ಷಾರ್ಥಿಗಳು ಭಾಗವಹಿಸಿದರು. ವರ್ಗವು ದಿನಾಂಕ ೨೦, ಭಾನುವಾರದಂದು ಉದ್ಘಾಟನೆಯೊಂದಿಗೆ ಪ್ರಾರಂಭಗೊಂಡಿತು. ಉದ್ಘಾಟನೆಯಲ್ಲಿ ಶ್ರೀಮತಿ ರಮಾರತ್ನ, ಪ್ರಾಂತ ಮಾತೃಶಕ್ತಿ ಪ್ರಮುಖ, ಶಿಬಿರಾರ್ಥಿಗಳಿಗೆ ವರ್ಗದ ವಿಶಿಷ್ಟತೆ ಹಾಗು ಉದ್ದೇಶವನ್ನು ತಿಳಿಸಿಕೊಟ್ಟರು.
ವರ್ಗದಲ್ಲಿ ಪ್ರಾಂತ ಕಾರ್ಯದರ್ಶಿಗಳಾದ ಶ್ರೀ ಜಗನ್ನಾಥ ಶಾಸ್ತ್ರಿಗಳು, ವಿಶ್ವ ಹಿಂದೂ ಪರಿಷದ್ ಹಾಗು ದುರ್ಗಾವಾಹಿನಿಯ ಸ್ಥಾಪನೆ ಹಾಗು ಬೆಳೆದುಬಂದ ಹಾದಿಯ ಬಗ್ಗೆ ವಿವರಿಸಿದರು. ಶ್ರೀಮತಿ ರಮಾರತ್ನರವರು ಲವ್ ಜಿಹಾದ್ ಹಾಗು ಶೋಡಷ ಸಂಸ್ಕಾರಗಳ ಬಗ್ಗೆ ತಿಳಿಸುತ್ತಾ ಹೆಣ್ಣಿಗೆ ಪವಿತ್ರ ಸ್ಥಾನ ನೀಡಿರುವುದು ಕೇವಲ ಸನಾತನ ಹಿಂದೂ ಧರ್ಮ ಮಾತ್ರ ಎಂದು ತಿಳಿಸಿದರು. ಶ್ರೀಮತಿ ವಿದ್ಯಾ ಮಲ್ಯ ಹಾಗು ತಂಡದವರು ಬಾಲಸಂಸ್ಕಾರ ಕೇಂದ್ರವನ್ನು ನಡೆಸುವುದನ್ನು ಪ್ರಾತ್ಯಕ್ಷಿಕೆಯ ಮೂಲಕ ಶಿಬಿರಾರ್ಥಿಗಳಿಗೆ ತೋರಿಸಿಕೊಟ್ಟರು.
ವಿಶ್ವ ಹಿಂದೂ ಪರಿಷದ್ ನ ಅಖಿಲ ಭಾರತ ಜಂಟಿ ಪ್ರಧಾನ ಕಾರ್ಯದರ್ಶಿ ಆಗಿ ಮಾರ್ಗದರ್ಶನ ಮಾಡುತ್ತಿರುವ ಶ್ರೀಯುತ ಸುರೇಂದ್ರ ಕುಮಾರ್ ಜೈನ್ ರವರು ನಮ್ಮ ಗೌರವಶಾಲಿ ಇತಿಹಾಸದ ಬಗ್ಗೆ ವಿವರಿಸಿದರು. ಶ್ರೀಮತಿ ರೇಖಾ ಲಕ್ಷ್ಮಣ್ ರವರು ಸಂವಹನ ಮತ್ತು ಸಂಪರ್ಕದಿಂದ ಸಂಬಂದಗಳು ಉಳಿದು ಬೆಳೆಯುವುದಕ್ಕೆ ಸಹಕಾರಿಯಾಗುತ್ತದೆ ಹಾಗು ಆತ್ಮವಿಶ್ವಾಸ ಹೆಚ್ಚಿಸುತದೆ ಎಂದು ತಿಳಿಸಿದರು. ಶ್ರೀಯುತ ಸುರೇಂದ್ರ ಕುಮಾರ್ ಜೈನ್ ರವರು ಮತ್ತೊಂದು ಅವಧಿಯಲ್ಲಿ ಕಾರ್ಯಕರ್ತರ ಗುಣ ಹಾಗು ವ್ಯವಹಾರದ ಬಗ್ಗೆ ತಿಳಿಸಿಕೊಟ್ಟರು.
ಶ್ರೀಯುತ ಟಿ. ಎ. ಪಿ. ಶೆಣೈ ರವರು ಎರಡು ದಿನ ನಮ್ಮೊಂದಿಗೆ ಇದ್ದು, ಒಂದು ದಿನ ಅಕ್ಕ ನಿವೇದಿತಾ ಮತ್ತೊಂದು ದಿನ ಶ್ರೀ ಕೃಷ್ಣನ ಬಗ್ಗೆ ತಿಳಿಸುತ್ತಾ ಸುಮಾರು ವರ್ಷಗಳಿಂದ ಅರ್ಥವಾಗದೇ ಉಳಿದಿರುವ ವ್ಯಕ್ತಿತ್ವವೆಂದರೆ ಅದು ಶ್ರೀ ಕೃಷ್ಣನದು ಹಾಗು ಅವನ ಅಪಾರವಾದ ಶಕ್ತಿಯನ್ನು ಮತ್ತು ರಾಜನೀತಿಯನ್ನು ವಿವರಿಸಿದರು. ಶ್ರೀ ರಾಜೇಶ್ ರವರು ಭಾಷಣದ ಬಗ್ಗೆ ತಿಳಿಸುತ್ತಾ ಭಾಷಣ ಹೇಗಿರಬೇಕೆಂದು ವಿವರಿಸಿದರು.
ಶ್ರೀಯುತ ಕೃಷ್ಣಮೂರ್ತಿ, ಬೆಂಗಳೂರು ಮಹಾನಗರದ ಕಾರ್ಯದರ್ಶಿಗಳು ವ್ಯವಸ್ಥಾ ಕೌಶಲ್ಯದ ಬಗ್ಗೆ ತಿಳಿಸುತ್ತಾ ಒಂದು ಕಾರ್ಯಕ್ರಮವನ್ನು ಆಯೋಜಿಸುವ ಮತ್ತು ಯಶಸ್ವಿಗೊಳಿಸುವುದನ್ನು ತಿಳಿಸಿಕೊಟ್ಟರು. ಮಂಗಳೂರು ವಿಭಾಗ ಕಾರ್ಯದರ್ಶಿಗಳಾದ ಶ್ರೀ ಶರಣ್ ಪಂಪ್ ವೆಲ್ ರವರು ಆಂದೋಲನ ಮತ್ತು ಪ್ರತಿಭಟನೆಗಳನ್ನೂ ಪ್ರಾತ್ಯಕ್ಷಿಕೆ ಮುಕಾಂತರ ತೋರಿಸಿಕೊಟ್ಟರು.
ಡಾಕ್ಟರ್ ಚಂದ್ರಶೇಖರ್ ರವರು ಮನೆಯಲ್ಲಿರುವ ವಸ್ತುಗಳಿಂದ ಸುಲಭವಾಗಿ ಔಷಧಿಗಳ್ಳನ್ನು ತಯಾರಿಸಿಕೊಂಡು ಅರೋಗ್ಯವನ್ನು ಕಾಪಾಡಿಕೊಳ್ಳುವ ಅನೇಕ ವಿದಾನಗಳನ್ನು ಹೇಳಿಕೊಟ್ಟರು. ಶ್ರೀಮತಿ ಛಾಯಾ ನಂಜಪ್ಪರವರು ಯುವತಿಯರಿಗೆ ಆರ್ಥಿಕ ಸ್ವಾವಲಂಬನೆಯ ಬಗ್ಗೆ ವಿವರಿಸಿದರು. ಪ್ರಾಂತ ಕ್ಷೇತ್ರಿಯ ಅಧಿಕಾರಿಗಳಾದ ಶ್ರೀಮತಿ ಕಿಶೋರಿ ತಾಯಿ ಜಿ ಯವರು ಶಕ್ತಿ ಸಾಧನ ಕೇಂದ್ರಗಳನ್ನೂ ನಡೆಸುವ ಬಗ್ಗೆ ಪ್ರಾತ್ಯಕ್ಷಿಕೆ ಮುಕಾಂತರ ತಿಳಿಪಡಿಸಿದರು. ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀಯುತ ಗೋಪಾಲ್ ಜಿ ಯವರು ಸಾಮಾಜಿಕ ಸಮರಸತೆಯ ಬಗ್ಗೆ ತಿಳಿಸಿದರು.
ಶ್ರೀಮತಿ ಕಾತ್ಯಾಯಿನಿ ಹಾಗು ಶ್ರೀಮತಿ ಸರಳವೇಣಿಯವರು ಹಿಂದೂ ಪರಿಕಲ್ಪನೆಯಲ್ಲಿ ಕೇಶಶೃಂಗಾರ ಮತ್ತು ಅದರ ಮಹತ್ವವನ್ನು ತೋರಿಸಿಕೊಟ್ಟರು. ಶ್ರೀಮತಿ ಮೀರಾ ಘಾಟೆಯವರು ನಮ್ಮ ಕಾರ್ಯಕ್ಷೇತ್ರದಲ್ಲಿರುವ ಅವಕಾಶಗಳು ಮತ್ತು ಎದುರಿಸಬೇಕಾಗುವ ಸವಾಲುಗಳ ಬಗ್ಗೆ ವಿವರಿಸಿದರು. ಇನ್ನು ಶಾರೀರಿಕ ವಿಭಾಗದಲ್ಲಿ ಸಮತಾ, ನಿಯುದ್ಧ, ದಂಡ, ಚುರಿಕಾ, ಯೋಗ ಹಾಗು ರೈಫೆಲ್ ಗಳನ್ನೂ ಶ್ರೀಮತಿ ವಿದ್ಯಾ ಮಲ್ಯ, ಕುಮಾರಿ ಅಕ್ಷತಾ ಹಾಗು ಕುಮಾರಿ ಶ್ವೇತಾ ರವರು ಹೇಳಿಕೊಟ್ಟರು. ಈ ವರ್ಗಕ್ಕೆ ಶ್ರೀಮತಿ ಕುಸುಮ ನಾರಾಯಣಾಚಾರ್ ರವರು ಶಿಬಿರಾಧಿಕಾರಿಯಾಗಿದ್ದರು.
ವರ್ಗದ ೬ನೇ ದಿನವಾದ ೨೬ ಶನಿವಾರದಂದು ಸಾರ್ವಜನಿಕ ಸಮಾರೋಪದಲ್ಲಿ ಶಿಬಿರಾರ್ಥಿಗಳು ಶಾರೀರಿಕ ಪ್ರದರ್ಶನ ನೀಡಿದರು. ಸಮಾರೋಪದಲ್ಲಿ ಶ್ರೀಯುತ ಬಾಲಸುಬ್ರಮಣ್ಯ, ಶ್ರೀಮತಿ ಕಿಶೋರಿ ತಾಯಿ ಜಿ, ಶ್ರೀಮತಿ ಕುಸುಮ ನಾರಾಯಣಾಚಾರ್, ಶ್ರೀ ಗೋಪಾಲ್ ಜಿ ಮತ್ತು ಶ್ರೀಮತಿ ರಮಾರತ್ನ ಉಪಸ್ಥಿತರಿದ್ದರು.
ಶಿಬಿರವು ೨೭ ಭಾನುವಾರದಂದು ದೀಕ್ಷಾಂತ ದೊಂದಿಗೆ ಸಮಾಪ್ತಿಗೊಂಡಿತು.

Back To Top